ಮಂಗಳೂರು, ಸೆ.20: ವಿದ್ಯಾರ್ಥಿಗಳು ತಮ್ಮ ಜೀವನದ ಅಲ್ಪಾವದಿ ಸಮಯದಲ್ಲಿ ತುಂಬಾ ಅವಕಾಶಗಳನ್ನು ಬಳಸಿಕೋಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ಅವಶ್ಯಕವಾದ ಶಿಸ್ತನ್ನು ನಡೆಸಲು ಬೇಕಾದ ಎಲ್ಲಾ ಮೌಲ್ಯಗಳನ್ನು ಮೈಗೂಡಿಸಬೇಕು. ಕಲಿತ ವಿದ್ಯೆಯನ್ನು ಜೀರ್ಣಿಸಿಕೋಳ್ಳಬೇಕು. ಸಂಸ್ಥೆಯಿಂದ ವಿದ್ಯಾರ್ಜನೆಯಾಗಿಸಿ ಹೊರಗೆ ಬಂದು ಸಂಸ್ಥೆಯ ರಾಯಬಾರಿಗಳಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಇಂದು ನಗರದ ಸೈಂಟ್ ಅಲೋಶಿಯಸ್ ಕೈಗಾರಿಕಾ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಉದ್ಘಾಟನೆಗೈದು ಮಾತನಾಡಿದರು.

ಮನುಷ್ಯ ಒಂಟಿ ಜೀವಿ ಅಲ್ಲ ಅವನಿಗೆ ಬದುಕಲು ಸಮಾಜ ಮುಖ್ಯ ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ಸಮಾಜದ ಬಗ್ಗೆ ಅರಿವನ್ನು ಗಳಿಸಬೇಕು ಸಮಾಜ ಹಾಗೂ ದೇಶವನ್ನು ಕಟ್ಟುವಂತಹ ಕೆಲಸಕ್ಕೆ ದ್ರಢ ಸಂಕಲ್ಪ ಮಾಡಬೇಕು ಜೊತೆಗೆ ಮಾನವೀಯತೆಯನ್ನು ಬೆಳೆಸಿ ಪ್ರಗತಿಯನ್ನು ಭರಿಸಬೇಕೆಂದು ಶಾಸಕರು ನುಡಿದರು ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ರೆಕ್ಟರ್ ರೆ.ಪಾ. ಡೆನ್ಜಿಲ್ ಲೋಬೊರವರು ಶಿಕ್ಷಣದಿಂದ ಕೇವಲ ಮೆದುಳನ್ನು ಮಾತ್ರ ತುಂಬಿಸದೆ ಶಿಕ್ಷಣದ ಜೊತೆಗೆ ಮಾನವೀಯತೆ ಹಾಗು ಮೌಲ್ಯಭರಿತ ಶಿಕ್ಷಣದಿಂದ ಶಿಸ್ತುಬದ್ದ ಜೀವನ ನಡೆಸಲು ದ್ರಢ ನಿರ್ದಾರ ಮಾಡಬೇಕು ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ರೆ.ಪಾ. ಎರಿಕ್ ಮಾತಾಯಸ್, ಪ್ರಾಂಶುಪಾಲರಾದ ರುಪೇಶ್ ಕುಮಾರ್, ಉಪ ಪ್ರಾಂಶುಪಾಲರಾದ ರೋಶನ್ ಡಿ’ಸೊಜ, ತರಬೇತಿ ಅಧಿಕಾರಿಗಳಾದ ರೋಮಿಯಸ್ ಡಿ’ಸೊಜ, ಸಂತೊಷ ಡಿ’ಕೊಸ್ತ, ಆಲ್ವಿನ್ ಮಿನೇಜಸ್ ಕಾರ್ಯಕ್ರಮವನ್ನು ಆಯೋಜಿಸಿದ್ದರು, ವಿನ್ಸೆಂಟ್ ಮೆಂಡೊನ್ಸರವರು ಕಾರ್ಯಕ್ರಮವನ್ನು ನಿರ್ವಹಿಸಿದರು.