ಮರೋಳಿ ವಾರ್ಡ್ ನಲ್ಲಿ ಅನೇಕ ಕಡೆ ಏರು ತಗ್ಗು ಪ್ರದೇಶಗಳಿರುತ್ತದೆ. ಹಂತಹಂತವಾಗಿ ಈ ಪ್ರದೇಶದಲ್ಲಿ ಕಾಮಗಾರಿಗಳು ನಡೆಯುತ್ತದೆ. ಎಲ್ಲಾ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅತೀ ಮುಖ್ಯ. ಈ ಪ್ರದೇಶವು ನಗರ ವಿಸ್ತ್ರತ ಭಾಗವಾಗಿರುವುದರಿಂದ ಹೆಚ್ಚಿನ ಅನುದಾನವನ್ನು ನೀಡಲು ಬಯಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಆಗಿದೆ. ಅತೀ ಶೀಘ್ರದಲ್ಲಿಯೇ ಅದರ ಸಂಪರ್ಕ ಕೊಡಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊರವರು ದಿನಾಂಕ 12-06-2016ರಂದು ಮರೋಳಿ ವಾರ್ಡ್‍ನಲ್ಲಿ ಸುಮಾರು 22 ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆ ಹಾಗೂ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಶಾಸಕರ ನಿಧಿ, ಎಸ್.ಎಫ್.ಸಿ. ನಿಧಿ ಹಾಗೂ ಕಾರ್ಪೋರೇಟರ್‍ರ ಬಜೆಟ್ ಅನುದಾನದ ನಿಧಿಯನ್ನು ಈ ಕಾಮಗಾರಿಗೆ ಬಳಸಲಾಗಿದೆ.

ಸಭೆಯಲ್ಲಿ ಸ್ಥಳೀಯ ಕಾರ್ಪೋರೇಟರ್ ಕೇಶವ ಮರೋಳಿ, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ದಾಸ್, ವಾರ್ಡ್ ಅಧ್ಯಕ್ಷ ಗಂಗಾಧರ್, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಕಾಂಗ್ರೆಸ್ ಮುಖಂಡ ಶಶಿರಾಜ್ ಅಂಬಟ್, ರಮಾನಂದ ಪೂಜಾರಿ, ದೇವಣ್ಣ, ವಿಲ್ಫಿ, ನೆಲ್ಸನ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.