Home » Website » News from jrlobo's Office » ಕುದ್ಮುಲ್ ರಂಗರಾವ್ ಮಾರ್ಗದರ್ಶನದಲ್ಲಿ ಮುನ್ನಡೆಯೋಣ: ಶಾಸಕ ಜೆ.ಆರ್.ಲೋಬೊ
ಕುದ್ಮುಲ್ ರಂಗರಾವ್ ಮಾರ್ಗದರ್ಶನದಲ್ಲಿ ಮುನ್ನಡೆಯೋಣ: ಶಾಸಕ ಜೆ.ಆರ್.ಲೋಬೊ
Image from post regarding ಕುದ್ಮುಲ್ ರಂಗರಾವ್ ಮಾರ್ಗದರ್ಶನದಲ್ಲಿ ಮುನ್ನಡೆಯೋಣ: ಶಾಸಕ ಜೆ.ಆರ್.ಲೋಬೊ

ಕುದ್ಮುಲ್ ರಂಗರಾವ್ ಮಾರ್ಗದರ್ಶನದಲ್ಲಿ ಮುನ್ನಡೆಯೋಣ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕುದ್ಮುಲ್ ರಂಗರಾವ್ ಅವರ ಆದರ್ಶವನ್ನು ಪಾಲಿಸಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಬಾಬುಗುಡ್ಡೆಯಲ್ಲಿ ಕುದ್ಮುಲ್ ರಂಗರಾವ್ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದರು. ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಈ ವ್ಯಕ್ತಿಯನ್ನು ನಾವು ನೆನಪಿಸಿಕೊಳ್ಳಬೇಕು. ದಲಿತರ ಏಳಿಗೆಗಾಗಿ ಅಹರ್ನಿಶಿ ದುಡಿದು ಸಮಾಜವನ್ನು ಕಟ್ಟಿದ ಪುಣ್ಯಪುರುಷ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಕುದ್ಮುಲ್ ರಂಗರಾವ್ ಸ್ಮಾರಕ ಸಮಿತಿಯ ಅಧ್ಯಕ್ಷರಾದ ಹೃದಯನಾಥ್, ಕಾರ್ಪೊರೇಟರ್ ಶೈಲಜಾ, ರಜನೀಶ್, ಕೆ.ಎಸ್.ಆರ್.ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕೇಶವ ಧರಣಿ, ಪ್ರಕಾಶ್ ಕೋಡಿಕಲ್, ಶ್ಯಾಮ್ ಕರ್ಕೇರ, ದಯಾಕರ್, ರವೀಂದ್ರನಾಥ್, ರಘುರಾಜ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು. ರಘುವೀರ ಬಾಬುಗುಡ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.