ಮಂಗಳೂರು: ಅಳಕೆಯಲ್ಲಿ ಸುಸಜ್ಜಿತ ಮಾರ್ಕೇಟ್ ನಿರ್ಮಿಸಬೇಕು, ಒಳ್ಳೆಯ ಜಾಗವಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಅಳಕೆ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇದು ಮಾದರಿ ಮಾರುಕಟ್ಟೆಯಾಗಿ ರೂಪುಗೊಳ್ಳಲು ಅವಕಾಶಗಳಿವೆ ಎಂದರು. ಇಲ್ಲಿ ವಾರದ ಸಂತೆಯನ್ನು ನಡೆಸಬೇಕು. ಮೀನು, ಮಾಂಸ, ಹಣ್ಣು ತರಕಾರಿಗಳಿಗೆ ಸ್ಟಾಲ್ ಗಳನ್ನು ನಿರ್ಮಿಸ ಬೇಕು. ಇನ್ನೊಂದು ತಿಂಗಳ ಒಳಗೆ ಮಾರುಕಟ್ಟೆ ನಿರ್ಮಾಣದ ಕೆಲಸ ಆರಂಭಿಸಬೇಕು ಎಂದರು. ಇಲ್ಲಿಗೆ ಯಾವ ರೀತಿಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಸಾಧ್ಯವೆಂದು ಯೋಜನೆ ಸಿದ್ಧಪಡಿಸಿ ತಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಾದ ಶ್ರೀನಿವಾಸ, ಯಶವಂತ, ಲಕ್ಷ್ಮಣ್ ಪೂಜಾರಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಸಂತೋಷ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಜೀಜ್, ಶಂಸುದ್ಧೀನ್ ಮುಂತಾದವರು ಉಪಸ್ಥಿತರಿದ್ದರು.