ಮಂಗಳೂರು, ನ.16: ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ವಿಶೇಷ ಮುತುವರ್ಜಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ 25 ಲಕ್ಷ ಅನುದಾನದಲ್ಲಿ ಶಕ್ತಿನಗರ ಪದವಿನ ಪ್ರೀತಿನಗರದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ವಿಶ್ವಾಸ್ ಕುಮಾರ್ ದಾಸ್, ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀಮತಿ ಅಖಿಲಾ ಆಳ್ವ, ಜೊನ್ ಬ್ಯಾಪ್ಟಿಸ್ಟ್ ಡಿ’ಸೋಜ, ಅರುಣ್ ಕುವೆಲ್ಲೊ, ಟಿ.ಕೆ ಸುಧೀರ್, ರಮಾನಂದ, ಶೈಲೇಶ್ ಆಳ್ವ, ಕ್ರತಿನ್ ಕುಮಾರ್, ಶೇಖರ್ ಪೂಜಾರಿ, ಯಶವಂತ, ಪೌಲಿನ್, ಸ್ಯಾಂಡ್ರ ಉಪಸ್ಥಿತರಿದ್ದರು.

preetinagar_25lakhs_road_01preetinagar_25lakhs_road_04preetinagar_25lakhs_road_03