Home » Website » News from jrlobo's Office » ಮಕರ ಸಂಕ್ರಾಂತಿ ಎಲ್ಲಾ ಜಾತಿ, ಧರ್ಮೀಯರಿಗೂ ಸೇರಿದ್ದು : ಶಾಸಕ ಜೆ.ಆರ್.ಲೋಬೊ
JRLobo
Photography of JRLobo in office

ಮಕರ ಸಂಕ್ರಾಂತಿ ಎಲ್ಲಾ ಜಾತಿ, ಧರ್ಮೀಯರಿಗೂ ಸೇರಿದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಕರ ಸಂಕ್ರಾಂತಿ ಹಬ್ಬವೂ ಎಲ್ಲಾ ಜಾತಿ, ಮತ, ಧರ್ಮದವರು ಆಚರಿಸುವಂತ ಪ್ರಕೃತಿದತ್ತ ಹಬ್ಬ. ಇದನ್ನು ನಾವೆಲ್ಲರೂ ಅದೇ ಕಲ್ಪನೆಯಿಂದ ಆಚರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕರ ಸಂಕ್ರಾಂತಿ ಹಬ್ಬದ ಉದಾತ್ತ ಕಲ್ಪನೆಯನ್ನು ನಾವು ತಿಳಿದುಕೊಂಡು ಅದರ ಪರಂಪರೆ, ಔಚಿತ್ಯವನ್ನು ಕಾಪಾಡಿಕೊಂಡು ಆಚರಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾತಿ, ಧರ್ಮದ ಕಟ್ಟುಪಾಡುಗಳಿಲ್ಲದೆ ಒಂದಾಗಿ ಆಚರಿಸುತ್ತಿರುವುದು ಇದರ ದ್ಯೋತಕವಾಗಿದೆ ಎಂದರು.

ಸಮಾರಂಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಶ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಮಹಿಳಾ ಅಧ್ಯಕ್ಷೆ ನಮಿತ ಡಿ.ರಾವ್, ಉತ್ತರ ಬ್ಲಾಕ್ ಮಹಿಳಾ ಅಧ್ಯಕ್ಷೆ ಶಶಿಕಲಾ, ಮುಡಾ ಸದಸ್ಯೆ ಶೋಭ ಕೇಶವ, ಎಸ್ ಸಿ ಎಸ್ ಟಿ ಅಧ್ಯಕ್ಷೆ ವಿಜಯಲಕ್ಷ್ಮಿ, ಕಾರ್ಪೊರೇಟರ್ ಆಶಾ ಡಿ’ಸಿಲ್ವಾ, ಶೈಲಜಾ, ಕವಿತಾ ವಾಸು, ಮಹಿಳಾ ಸದಸ್ಯೆಯರಾದ ಕವಿತಾ ಶೆಟ್ಟಿ, ಜ್ಯೋತಿ, ಮೇಝಿ, ಮಮತಾ, ಸರಳಾ ಕರ್ಕೇರ, ಫೋರ, ತೆರೆಜಾ, ಗೀತಾ, ಜೊಹಾರ, ಲಕ್ಷ್ಮಿ ನಾಯರ್, ಗೀತಾ ಪ್ರವೀಣ್, ವಿಕ್ಟೋರಿಯಾ ಮುಂತಾದವರಿದ್ದರು.