ಮಂಗಳೂರು: ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಶಾಸಕ ಜೆ. ಆರ್ ಲೋಬೊರವರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮನೆ ನಿವೇಶನಕ್ಕಾಗಿ ಈಗಾಗಲೇ ಸುಮಾರು 1,200 ಕ್ಕಿಂತಲೂ ಅಧಿಕ ಅರ್ಜಿಗಳು ಬಂದಿದ್ದು, ಭೂಮಂಜೂರತಿಯ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಆಶ್ರಯ ಸಮಿತಿ ಹಲವಾರು ಸಭೆಗಳನ್ನು ನಡೆಸಿದ್ದು, ಕಣ್ಣೂರು ಪರಿಸರದಲ್ಲಿ 11 ಎಕ್ರೆ ಸರಕಾರಿ ಭೂಮಿಯಲ್ಲಿ ಜಿ+2 ಮಾದರಿಯಂತೆ ಪ್ರತಿ ಅರ್ಹ ಕುಟುಂಬಕ್ಕೆ ಒಂದು ಹಾಲ್, ಶೌಚಾಲಯ, ಮಲಗುವ ಹಾಗು ಅಡುಗೆ ಕೋಣೆ ಇರುವ ಬಹುಮಹಡಿ ವಸತಿಸಂಕೀರ್ಣ ನಿರ್ಮಿಸಲು ನೀಲಿ ನಕಾಶೆ ಸಿದ್ದ ಪಡಿಸಲಾಗಿದೆ. ಮೊದಲ ಹಂತದಲಿ,್ಲ ಆರ್ಜಿ ಸಲ್ಲಿಸಿದ ಅರ್ಹ 500 ನಿವೇಶನ ರಹಿತ ಕುಟುಂಬಗಳನ್ನು ಶೀಘ್ರದಲ್ಲಿ ಅಯ್ಕೆ ಮಾಡಲಾಗುವುದು. ಪ್ರತಿ ನಿವೇಶನಕ್ಕೆ ಸುಮಾರು 4 ಲಕ್ಷ ರೂಪಾಯಿ ನಿರ್ಮಾಣ ವೆಚ್ಚವಾಗುವುದೆಂದು ಅಂದಾಜಿಸಿದ್ದು, ಇದರಲ್ಲಿ ಸರಕಾರದಿಂದ 1.20 ಲಕ್ಷ ಹಾಗು ಮಹಾನಗರ ಪಾಲಿಕೆಯಿಂದ 20 ಸಾವಿರ ರೂಪಾಯಿ ಅನುದಾನವನ್ನು ಪ್ರತಿ ಮನೆ ನಿವೇಶನಕ್ಕೆ ನೀಡಲಾಗುವುದು. ಉಳಿದ ಹಣವನ್ನು ಫಲನುಭವಿಗಳು ಬ್ಯಾಂಕ್ ಸಾಲದ ಮೂಲಕ ಬರಿಸಬೇಕು ಎಂದು ಸಭೆಯನ್ನು ಉದ್ದೇಶಿಸಿ ಶಾಸಕರು ತೀಳಿಸಿದರು.

ಭೂಮಂಜೂರತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಶಾಸಕ ಜೆ.ಆರ್.ಲೋಬೋ

Image from post regarding ಭೂಮಂಜೂರತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಶಾಸಕ ಜೆ.ಆರ್.ಲೋಬೋ