ಮಂಗಳೂರು,ಸೆ.29: ಈ ವರ್ಷದ ಆರಂಭದಲ್ಲಿ ಮಳೆಯ ನಿಮಿತ್ತ ಕಂಕನಾಡಿಯ ಪಂಪ್‍ವೆಲ್ ಬಳಿ ಮಳೆನೀರಿನ ತೋಡಿನಲ್ಲಿ ಬಿದ್ದು ತೀರಿಹೋದ ಮಗು ಶ್ರೀನಿಧಿ 3.5 ವರ್ಷ ಪ್ರಾಯ ಇವರ ತಾಯಿಗೆ ರೂ 1.5 ಲಕ್ಷ ಪರಿಹಾರವನ್ನು ಸರಕಾರದ ವತಿಯಿಂದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ವಿತರಿಸಿದರು. ಶ್ರೀ ಐವನ್ ಡಿ’ಸೋಜ, ವಿಧಾನ ಪರಿಷತ್ ಸದಸ್ಯರು ಶ್ರೀಮತಿ ಆಶಾ ಡಿ’ಸಿಲ್ವ, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು, ಶ್ರೀ ಹೇಮಂತ್ ಗರೋಡಿ,ವಾರ್ಡ್ ಅಧ್ಯಕ್ಷರು ಕೇಶವ ಮರೋಳಿ, ಪ್ರಕಾಶ್, ಜಗನ್ನಾಥ್, ಅಬ್ಬಾಸ್, ವಿ.ಎ. ರಾಜ್‍ಕುಮಾರ್ ಕಂಕನಾಡಿ, ಇವರೆಲ್ಲಾರೂ ಹಾಜರಿದ್ದರು. ಈ ಮಗು ತೀರಿಹೋಗಿ 6 ತಿಂಗಳು ಕಳೆದರೂ ಕೂಡ ಸರಕಾರದ ಕೆಲವು ಅಧಿಕಾರಿಗಳು ಅನಾವಶ್ಯಕವಾಗಿ ಪರಿಹಾರ ಮಂಜೂರು ಮಾಡುವುದರಲ್ಲಿ ವಿಳಂಭ ಮಾಡುವುದರ ಕುರಿತು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬೇಸರ ವ್ಯಕ್ತಪಡಿಸಿ ಈ ಪ್ರಕರಣವನ್ನು ಮಾನವೀಯತೆಯ ನೆಲೆಯಲ್ಲಿ ಪರಿಹಾರವನ್ನು ಕೊಡಿಸುವಲ್ಲಿ ಕ್ರಮ ಜರುಗಿಸುವಂತೆ ಮಾಡಿಸಿದರು. ಸ್ಥಳೀಯ ಮಹಾನಗರ ಸದಸ್ಯರಾದ ಶ್ರೀಮತಿ ಆಶಾ ಡಿ’ಸಿಲ್ವರವರು ಮತ್ತು ಸ್ಥಳೀಯ ನಾಗರಿಕರು ಈ ಪರಿಹಾರ ಸಿಗಲು ಶ್ರಮಿಸಿರುವರು ಶ್ರೀ ಜೆ.ಆರ್ ಲೋಬೊರವರು ಈ ಪರಿಹಾರ ಕೊಡಿಸುವಲ್ಲಿ ಶ್ರಮಿಸಿದ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು.

preeti nagar_03

preeti nagar_02