Home » Website » News from jrlobo's Office » ನಾಳೆ 10.05.2018 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಪಾದಯಾತ್ರೆ
JRLobo
Photography of JRLobo in office

ನಾಳೆ 10.05.2018 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಪಾದಯಾತ್ರೆ

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ನಾಳೆ 10.05.2018 ರಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಜೆ. ಆರ್. ಲೋಬೊ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪಾದಯಾತ್ರೆಯು ಮಂಗಳೂರು ನೆಹರೂ ಮೈದಾನದಿಂದ ಸಂಜೆ 3.00 ಗಂಟೆಗೆ ಹೊರಡಲಿರುವುದು. ಈ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಶ್ರೀ ಬಿ. ಜನಾರ್ಧನ ಪೂಜಾರಿ ಹಾಗೂ ರಾಜ್ಯದ ಇಂಧನ ಸಚಿವ ಶ್ರೀ ಡಿ.ಕೆ. ಶಿವಕುಮಾರ್ ಸಹಿತ ಅನೇಕ ನಾಯಕರು ಭಾಗವಹಿಸಲಿರುವರು. ಈ ಪಾದಯಾತ್ರೆಯು ನೆಹರೂ ಮೈದಾನದಿಂದ ಹೊರಟು ಹಂಪನಕಟ್ಟೆ ಸಿಗ್ನಲ್, ಪಿ.ವಿ.ಎಸ್. ವೃತ್ತ, ಎಂ.ಜಿ. ರಸ್ತೆ, ಲೇಡಿಹಿಲ್ ವೃತ್ತ ಆಗಿ ಉರ್ವ ಮಾರ್ಕೆಟ್ ಮೈದಾನದಲ್ಲಿ ಸಮಾಪನ ಗೊಳ್ಳಲಿರುವುದು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.