ಮಂಗಳೂರು: ಜನರಿಗೆ ಉಪಯೋಗವಾಗಲೆಂದು ಆಧಾರ್ ಕಾರ್ಡ್ ಮಾಡುವ ವ್ಯವಸ್ಥೆಯನ್ನು ಮಾಡಿದ್ದು ಇಲ್ಲಿಯವರೆಗೆ ಹದಿನೈದು ಕಡೆಗಳಲ್ಲಿ ವ್ಯವಸ್ಥಿತವಾಗಿ ಮುಗಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಕಂಕನಾಡಿ ಬಿ ವಾರ್ಡ್ ನ ಕಪಿತಾನಿಯಾ ಸರ್ಕಾರಿ ಶಾಲೆಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಜನರು ಯಾವುದೇ ಕಾರಣಕ್ಕೂ ಬೇಸರ ಪಡದೆ ಆಧಾರ್ ಕಾರ್ಡ್ ಮಾಡಿಕೊಳ್ಳಬೇಕು. ಇದು ಇನ್ನೂ ಒಂದು ತಿಂಗಳು ಮಂಗಳೂರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಮುಂದುವರಿಯಲಿದೆ ಎಂದರು.

ಅನುಕೂಲವಾಗಲೆಂದು ಎರಡು ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನೂ ಹೆಚ್ಚಿನ ಯಂತ್ರಗಳನ್ನು ತರಿಸುವ ಪ್ರಯತ್ನವಾಗುತ್ತಿದೆ. ಅವೂ ಬಂದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಶಾಸಕರು ಕೆಲ ಕಾಲ ಆಧಾರ್ ಕಾರ್ಡ್ ನೋಂದಣೆ ಕೇಂದ್ರದಲ್ಲಿದ್ದು ಅಲ್ಲಿನ ಕೆಲಸಗಳನ್ನು ನೋಡಿ ಪ್ರಸಂಶೆ ವ್ಯಕ್ತಪಡಿಸಿದರು.